ಬಹಳ ದಿನಗಳ ನಂತರ
ಸಿಕ್ಕಿದ ಆ ಹೆಗಲು
ಮೊದಲ ನೋಟದಲ್ಲೇ ಸನಿಹವಾದವಳು ಅವಳು
ಸ್ನೇಹದ ಸೇತುವೆ ಕಟ್ಟುವ ತವಕ ,
ಆ ಸನಿಹ ನನಗೆ ಮಾತ್ರವೇ ಅನ್ನುವ ಆತಂಕ !
ನನ್ನ ಬಿಚ್ಚು ಮಾತು
ಅವಳಿಗೆ ಚುಚ್ಚುವುದೇ ಎನ್ನುವ ಭೀತಿ
ಅದಕ್ಕೆ ಗೆಳತೀ
ನನ್ನ ಈ ಫಿಲ್ಟರ್ಡ್ ಮಾತು .
ನನ್ನ ಇಷ್ಟ ಕಷ್ಟ
ಸೇತುವೆಯಾ ಒಡೆದೀತೆ ಎನ್ನುವ ಪ್ರಶ್ನೆ ,
ಆ ಉತ್ತರ ಸಿಗೋವರೆಗೂ
ನನ್ನ ಈ ಸೋಸಿದ ಮಾತು
ಅಳೆದು ತೂಗಿದ ಮಾತು
ಸ್ನೇಹ ಗಟ್ಟಿ ಮಾಡದು
ಆದರೆ ತೆರೆದ ಮನಸು
ಯಾತ್ರೆಯಾ ಮುಗಿಸುವುದೇ ಎನ್ನೋ ಭಯದಲ್ಲಿ ,
ಆ ಸ್ನೇಹದ ಸಂಕೋಲೆ ಕಾಲದ ಕೈ ಕೊಟ್ಟಿರುವೆ
ಒಂದು ದಿನ
ನನ್ನ ಮೌನ ನಿನಗೆ ಮಾತಾಗುವುದು
ನಿನ್ನ ಬೈಗುಳ ನನಗೆ ಕಾವ್ಯವಾಗುವದು
ಆ ದಿನಕ್ಕೆ ನನ್ನ ತಾಳ್ಮೆಯ ಕಾತರ
ಶನಿವಾರ, ನವೆಂಬರ್ 5, 2022
ಗೆಳತಿ
Friend
She was unfamiliar
Yet saw a friend in her
One thousand questions arise!
Does my likes make her smile blight
And my dislikes glee?
Does she love what I show
Or what I am in?
I sag in the heavy load
I rise to the thought
I aim a friend so
I have to attempt to seek!
ಭಾನುವಾರ, ಆಗಸ್ಟ್ 28, 2022
ಪಯಣ
ಇರುವುದ ಬಿಟ್ಟು ಓಡುವ ತವಕ ,
ಇರದಿರುವುದ ಪಡೆಯುವ ಹಂಬಲ
ಪಯಣ ಸಾಗುತಲೆ ಇರುವುದು.
ನಿಲ್ದಾಣ ಬಂದಂತೆ
ಇರದಿರುವುದು ಇಲ್ಲದಾಗುವುದು
ಇಲ್ಲದಿರುವುದು ಇರುವುದಾಗುವುದು.
ಮತ್ತೊಮ್ಮೆ ಅದೇ ಪಯಣ .
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)