ದನಿ...... ಅಂತರಾಳದ ಮಾತು.
ಮಂಗಳವಾರ, ಸೆಪ್ಟೆಂಬರ್ 30, 2008
ಮನಸು - ಕನಸು
ಎಲ್ಲೋ ಓಡಿ ಹೋಗುತ್ತಿದೆ,
ಕಾಣದ ರತ್ನದ ಹಿಂದೆ,
ನಿಲ್ಲು ಎಂಬ ಕೂಗಿಗೆ ಕಿವುಡನಾಗಿ,
ದೂರ ದೂರ ಸರಿಯುತ್ತಿದೆ!!!!
ಎತ್ತ ಹೋಗುತ್ತಿದೆ ಎಂದು ತಿಳಿಯದು,
ಎತ್ತ ನಿಲ್ಲ ಬೇಕೆಂಬುದ ಅರಿಯದು ,
ಹುಚ್ಚನಂತೆ ಬೇಡವೆಂದರೂ ಕೇಳದೆ,
ಓಡುತ್ತಿದೆ ನನ್ನಿಂದ ದೂರವಾಗಿ!!!!
ನಿಲ್ಲು ಮನಸೆ ಎಂದರು ಕೇಳುತ್ತಿಲ್ಲ,
ಅದಕ್ಕೆ ಅದರ ಜೀವ ಪಡೆವ ಆತುರ,
ನನಗೆ ನನ್ನ ಅಸ್ತಿತ್ವ ಉಳಿಸಿಕೊಳ್ಳುವ ಕಾತುರ!!
ಅನ್ಯ ಮನಸ್ಕಳಾಗಿ ನಾನು ಓಡುತ್ತಿರುವೆ!!!!
ನನ್ನ ಅಸ್ತಿತ್ವ ಈ ಮನಸ್ಸು,
ಮನಸ್ಸಿನ ಜೀವ ಈ ನಿರ್ದಯಿ ಕನಸು!!!!!!
ಇನ್ನು ಓಡುತ್ತಿರುವೆ,
ನನ್ನ ಮುಂದೆ ಮನಸು,
ಮನಸ್ಸಿನ ಮುಂದೆ ಕನಸು!!!!!!!
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)