ಶನಿವಾರ, ನವೆಂಬರ್ 5, 2022

ಗೆಳತಿ

ಬಹಳ ದಿನಗಳ ನಂತರ
ಸಿಕ್ಕಿದ ಆ ಹೆಗಲು

ಮೊದಲ ನೋಟದಲ್ಲೇ ಸನಿಹವಾದವಳು ಅವಳು
ಸ್ನೇಹದ ಸೇತುವೆ ಕಟ್ಟುವ ತವಕ ,
ಆ ಸನಿಹ ನನಗೆ ಮಾತ್ರವೇ ಅನ್ನುವ ಆತಂಕ !

ನನ್ನ ಬಿಚ್ಚು ಮಾತು
ಅವಳಿಗೆ ಚುಚ್ಚುವುದೇ ಎನ್ನುವ ಭೀತಿ
ಅದಕ್ಕೆ ಗೆಳತೀ
ನನ್ನ ಈ ಫಿಲ್ಟರ್ಡ್ ಮಾತು .

ನನ್ನ ಇಷ್ಟ ಕಷ್ಟ
ಸೇತುವೆಯಾ  ಒಡೆದೀತೆ ಎನ್ನುವ ಪ್ರಶ್ನೆ  ,
ಆ ಉತ್ತರ ಸಿಗೋವರೆಗೂ
ನನ್ನ ಈ ಸೋಸಿದ ಮಾತು
 
ಅಳೆದು ತೂಗಿದ ಮಾತು
ಸ್ನೇಹ ಗಟ್ಟಿ ಮಾಡದು  
ಆದರೆ ತೆರೆದ ಮನಸು
ಯಾತ್ರೆಯಾ ಮುಗಿಸುವುದೇ ಎನ್ನೋ ಭಯದಲ್ಲಿ ,  
ಆ ಸ್ನೇಹದ ಸಂಕೋಲೆ ಕಾಲದ ಕೈ ಕೊಟ್ಟಿರುವೆ  

 ಒಂದು ದಿನ
ನನ್ನ ಮೌನ ನಿನಗೆ  ಮಾತಾಗುವುದು  
ನಿನ್ನ  ಬೈಗುಳ ನನಗೆ ಕಾವ್ಯವಾಗುವದು  
ಆ ದಿನಕ್ಕೆ ನನ್ನ ತಾಳ್ಮೆಯ ಕಾತರ

Friend

 She was unfamiliar
Yet saw a friend in her
One thousand questions arise!

Does my likes make her smile blight
And my dislikes glee?
Does she love what I show
Or what I am in?

I sag in the heavy load
I rise to the thought
I aim a friend so
I have to attempt to seek!