ದುಃಖದಲು ಸುಖದಲು,
ಯಾರಿರಲಿ ಬಿಡಲಿ,
ನಾನಿರುವೆ ಎಂದು ಓಡಿ,
ಬರುವವ!!!
ಮುಂದೆ ಕಾಣುವುದು ಬರಿ,
ಕಗ್ಗತ್ತಲು ಎಂದು ಬವಣಿಸಿದಾಗ,
ದುಃಖದ ಎಳೆಯ ಹೊತ್ತೊಯ್ದು,
ಹೊರ ತಂದು ಸಂತೈಸುವವ..
ಪಟ್ಟ ಕಷ್ಟಕ್ಕೆ ಸಿಕ್ಕಿತು,
ಫಲವೆಂದು, ಸಂಭ್ರಮಿಸಿದಾಗ,
ಫಟ್ಟನೆ ಹೊರ ಬಂದು,
ನನ್ನೊಟ್ಟಿಗೆ ನಗುವವ!!
ತಾ ಬರುವುದಲ್ಲದೆ,
ತನ್ನೊಟ್ಟಿಗೆ ತನ್ನ ಗೆಳೆಯರನ್ನು ತಂದು,
ನನ್ನ ಸುಖ ದುಃಖದಲ್ಲಿ ಭಾಗಿಯಾಗುವವ!!
ದುಃಖದಲ್ಲಿ ಕಣ್ಣ ಹನಿಯಾಗಿ,
ಸುಖದಲ್ಲಿ ಆನಂದ ಬಾಷ್ಪವಾಗಿ
ನನ್ನೊಂದಿಗೆ ಕಾಲ ಸವೆಸುತಿದೆ,
ಈ ಕಣ್ಣ ಹನಿ...........
-ರಂಜಿತ