ಸಾಗರದ ಆಳದಲಿ ಬಚ್ಚಿಟ್ಟ
ಮುತ್ತಿನ ಚಿಪ್ಪುಗಳಂತೆ
ಗೆಳತೀ ,
ನಿನ್ನ ಸುಪ್ತ ಮನಸಿನ ಭಾವನೆಗಳು
ಅಗಾಧ , ಅಮೋಘ !
ರವಿಯ ಹೊಂಗಿರಣಕ್ಕೆ
ಮಂಜು
ನಾಚಿ ಕರಗಿದಂತೆ
ನೀ ಸ್ವಲ್ಪ ನಾಜೂಕು!
ಅದೇ ಮಂಜು,
ಬಿಸಿಲಿನ ಬೇಗೆಗೆ
ಸಿಟ್ಟಲ್ಲಿ ನೀರಾಗಿ ಹರಿದಂತೆ
ನೀ ಕೊಂಚ ಖಡಕ್ಕು !
ನಮ್ಮ ಈ ಗೆಳೆತನ
ರವಿಯ ಹೊಂಗಿರಣವಾಗಲಿ
ಗೆಳತೀ ,
ನಿನ್ನ ಮೊಗದ ಆ ನಗು
ಮನದ ಕನ್ನಡಿಯಾಗಲಿ
ಆ ಮನಸಿನ ಚೈತನ್ಯ
ನಮ್ಮ ಗೆಳೆತನವಾಗಲಿ
-ರಂಜಿತ