ನಾನಿದ್ದು, ತಿನ್ನಲು ಅನ್ನ ಸಿಗುವುದೋ ಎಂಬ ಭಯ,
ಅನ್ನವಿದ್ದು, ಇರಲು ಸೂರಿರುವುದೋ ಎಂಬ ಭಯ!
ಇರಲು ಮನೆಯಿದ್ದು ಈ ದಿನವಿರುವ
ಕೆಲಸ,ನಾಳೆಯವರೆಗೂ ಇರುವುದೂ ಎಂಬ ಭಯ .
ಕೆಲಸವಿದ್ದೋ,ಈ ಸಲ ಸಂಬಳ ಹೆಚ್ಚಾಗುವುದೋ
ಎಂಬ ಭಯ!!!
ಸಂಬಳ ಹೆಚ್ಚಾಗಿ, ಬಡ್ತಿ ಸಿಗುವುದೋ ಎಂಬ ಭಯ!
ತಿಳಿಯದು,
ಮನಸ್ಸಲ್ಲಿ ಭಯವಿದೆಯೋ,
ಭಯದ ಮಡುವಿನಲ್ಲಿ ಮನಸ್ಸು ಮುಳುಗಿದೆಯೋ!
ಜೀವನ ನಡೆಸುವ ಬದಲು,
ಭಯದ ಕೈಗೆ ಸೂತ್ರ ಕೊಟ್ಟು,
ನಗುವ ಬದಲು ನಡುಗುತ್ತ ನಡೆದಿದ್ದೇವೆ!!!!
- ರಂಜಿತ
very beautifully expressed ....!!!
ಪ್ರತ್ಯುತ್ತರಅಳಿಸಿ