ಒಂದೆ ಒಂದು ಸಲ ಸುರಿದು ಬಿಡು
ಬದುಕಿನ ಜಡತ್ವವ ಹೋಗಲಾಡಿಸಲು,
ಬಾಯಾರಿದ ಜೀವಕೆ ನೀರುಣಿಸಲು ,
ಕಾದ ಜೀವಕೆ ಆಶಾಕಿರಣವಾಗಲು !!!
ದೂರವಾಗಿಸುವ ಗಾಳಿಗೆದುರು ಮೆಟ್ಟಿ ನಿಲ್ಲು
ನನಗೋಸ್ಕರ ಕೊಂಚ ಸುರಿದು ಬಿಡು..
ಸೋಲನುಂಡು, ಹೆದರಿ ಬೆಚ್ಚಿ ಬಿದ್ದಿರುವೆ ,
ನಿರಾಶಾವಾದವ ಕೊಚ್ಸಿಕೊಂಡು ಹೋಗು
ಒಂದೆ ಒಂದು ಸಲ ಸುರಿದು ಬಿಡು !!!
ಕಹಿ ನೆನಪುಗಳ ಧಗೆಯಲಿ ಬೇಯುತಿರುವೆ
ಧಗೆಯ ನಳಿಸಿ ಮನ ತಣಿಸಲು ,
ನೆನಪುಗಳ ಸಂಕೋಲೆ ಬಿಚ್ಚಿ
ಮುಂದಿರುವ ಕನಸಿನತ್ತ ನಡೆಯಲು
ಒಂದೆ ಒಂದು ಸಲ ಸುರಿದು ಬಿಡು !!!
ಕತ್ತಲಲಿರುವ ಮನಸ ಕದ ತಟ್ಟಿ ಬಿಡು ,
ಹೊರಗಿನ ಬೆಳಕಿನೆಡೆಗೆ ಹೋಗಲು ,
ಒಂದೆ ಒಂದು ಸಲ ಸುರಿದು ಬಿಡು !!!
-ರಂಜಿತ
Awesome..,,,😀
ಪ್ರತ್ಯುತ್ತರಅಳಿಸಿ