ಬಹಳ ದಿನಗಳ ನಂತರ
ಸಿಕ್ಕಿದ ಆ ಹೆಗಲು
ಮೊದಲ ನೋಟದಲ್ಲೇ ಸನಿಹವಾದವಳು ಅವಳು
ಸ್ನೇಹದ ಸೇತುವೆ ಕಟ್ಟುವ ತವಕ ,
ಆ ಸನಿಹ ನನಗೆ ಮಾತ್ರವೇ ಅನ್ನುವ ಆತಂಕ !
ನನ್ನ ಬಿಚ್ಚು ಮಾತು
ಅವಳಿಗೆ ಚುಚ್ಚುವುದೇ ಎನ್ನುವ ಭೀತಿ
ಅದಕ್ಕೆ ಗೆಳತೀ
ನನ್ನ ಈ ಫಿಲ್ಟರ್ಡ್ ಮಾತು .
ನನ್ನ ಇಷ್ಟ ಕಷ್ಟ
ಸೇತುವೆಯಾ ಒಡೆದೀತೆ ಎನ್ನುವ ಪ್ರಶ್ನೆ ,
ಆ ಉತ್ತರ ಸಿಗೋವರೆಗೂ
ನನ್ನ ಈ ಸೋಸಿದ ಮಾತು
ಅಳೆದು ತೂಗಿದ ಮಾತು
ಸ್ನೇಹ ಗಟ್ಟಿ ಮಾಡದು
ಆದರೆ ತೆರೆದ ಮನಸು
ಯಾತ್ರೆಯಾ ಮುಗಿಸುವುದೇ ಎನ್ನೋ ಭಯದಲ್ಲಿ ,
ಆ ಸ್ನೇಹದ ಸಂಕೋಲೆ ಕಾಲದ ಕೈ ಕೊಟ್ಟಿರುವೆ
ಒಂದು ದಿನ
ನನ್ನ ಮೌನ ನಿನಗೆ ಮಾತಾಗುವುದು
ನಿನ್ನ ಬೈಗುಳ ನನಗೆ ಕಾವ್ಯವಾಗುವದು
ಆ ದಿನಕ್ಕೆ ನನ್ನ ತಾಳ್ಮೆಯ ಕಾತರ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ