ಸೋಮವಾರ, ಜುಲೈ 28, 2008

ಜೀವನ

ಜೀವನವೆಂದರೇನು ,
ಹೊಟ್ಟ್ಗೊಂದಿಷ್ಟು ಊಟ
ಮೈಗೊಂದಿಷ್ಟು ಬಟ್ಟೆ
ಇರಲಿಕ್ಕೊಂದು ಸೂರು !!!

ಈ ತ್ರಿಪಾತ್ರಗಳ ಮನ ತಣಿಸಲು
ಏನೆಲ್ಲಾ ಕಾದಾಟ, ಏನೆಲ್ಲಾ ಹೊಡೆದಾಟ
ಪರರ ಕಾಲೆಳೆದು ಮುಂಬರುವವ ಒಬ್ಬ
ರಕ್ತವನೆ ಸುರಿಸಿ ಸಾಧಿಸುವವ ಇನ್ನೊಬ್ಬ,
ಜೀವನವೆಂದರೆ ಇದೇನಾ???

ಕ್ಷಣಿಕ ಸುಖವ ಪಡೆವ ತವಕ,
ಇರುವುದನ ಮರೆತು, ಪರರ
ಸ್ವತ್ತ ಪಡೆಯುವ ಬಯಕೆ,
ಪರರ ಮೆಟ್ಟಿ, ಮುಂಬರುವೆ
ಎಂಬ ಆಸೆಯ ಅತಿರೇಕ!!
ಜೀವನವೆಂದರೆ ಇದೇನಾ???

ಸಾಧಿಸಲೆಬೇಕೆಂಬ ಹುಮ್ಮಸ್ಸು,
ಮಗುವ ನಗುವ ನೋಡಲಾರದಷ್ಟು ಆತುರ!!
ಹಂಬಲಿಸುವ ತಾಯಿಯ ಕಾಣದಷ್ಟು ಅನಾದರ,
ಜೀವನವೆಂದರೆ ಇದೇನಾ???

-ರಂಜಿತ



ಗೆಳೆಯ

ಗೆಳೆಯ
ದಡಬಡಿಸಿ ಮುನ್ನುಗ್ಗುತಿರುವ
ಈ ಕಾಲ ಬದಲಾಗಿದೆಯ,
ಅಥವಾ, ಅದರ ಗತಿಯಲಿ
ನಡೆಯಬೇಕೆನ್ನುತ್ತಿರುವ ಗೆಳೆಯ
ನೀನು ಬದಲಾಗಿದ್ದೀಯಾ?

ಪ್ರೀತಿಯೇಮ್ಬ ಮರಳಿನಲ್ಲಿ, ಆಸೆಯ
ಗೋಪುರ ಹೊತ್ತು ಕಟ್ಟಿದ್ದ ಮರಳಿನ ಮನೆ,
ನೆನಪಿದೆಯೆ??
ಆಸೆಯ ಗೋಪುರ ಈಗ ಅರಮನೆಯಾಗಿದೆ
ಆದರೆ ಅಲ್ಲಿ ಪ್ರೇಮವಿಲ್ಲ,
ಹೇಳು,
ಗೆಳೆಯ ನೀನು ಬದಲಾಗಿದ್ದೀಯ?

ನನಗೋಸ್ಕರ ನೀನಿದ್ದೆ, ಜೊತೆಗೂಡಿ
ಕನಸು ಕಾಣುತ್ತಿದ್ದ, ಆ ಸಮಯ
ನೆನಪಿದೆಯೆ??
ಕನಸುಗಳೆನೋ ನನಸಾಗಿವೆ
ಆದರೆ ನಿನಗೆ ನನಗೋಸ್ಕರ ಸಮಯವಿಲ್ಲ
ಹೇಳು,
ಗೆಳೆಯ ನೀನು ಬದಲಾಗಿದ್ದೀಯ?


ಎಡವಿ ಬಿದ್ದೆನೆಂದು, ಇಡಿ
ದಿನ ನನ್ನ ಜೊತೆ ಕಳೆದಿದ್ದು
ನೆನಪಿದೆಯೆ??
ಈಗ ದುಃಖದ ಮಡುವಿನಲ್ಲಿರುವೆ
ಕಣ್ಣಂಚಲಿರುವ ಹನಿ ಕಾಣದಾದೆಯ
ಏಕಿ ಬದಲಾವಣೆ ಗೆಳೆಯ???

ಇನ್ನು,
ಕಾಲದ ಗತಿಯಲ್ಲಿ ಚಲಿಸಿದ್ದು ಸಾಕು
ನಿನ್ನ ಹಿಂದೆಯೇ ಓಡುತ್ತಿದ್ದೇನೆ,
ನನಗೋಸ್ಕರ ಸ್ವಲ್ಪ,
ಕಾಯುವೆಯ ಗೆಳೆಯ??

- ರಂಜಿತ

ಜಗತ್ತು

ಜಗತ್ತು

ಹೌದು ಜಗತ್ತೇ, ನೀನೆ ಸರಿ
ನನ್ನೊಬ್ಬ ಒಬ್ಬಂಟಿ, ನಾನೊಬ್ಬ
ಏಕಾಂಗಿ, ನಿನ್ನ ಜನರ ಹತ್ತಿರ
ಸಲ್ಲದವಳು ನಾನು, ನೀನೆ ಸರಿ !!

ಪರರ ದುಃಖ ಕೇಳಿ, ಮನದೊಳು
ಮುಸಿ ಮುಸಿ ನಕ್ಕು, ಬಾಯಲ್ಲಿ
ಸಂತೈಸುವವರ ಹತ್ತಿರ, ಬೆರೆಯಲೊಲ್ಲದ
ನಾ ಒಬ್ಬ ಒಬ್ಬಂಟಿ ಅಲ್ಲವೇ?

ಇವರಿಂದ ಲಾಭವಾದೀತೆಂದು ಸ್ನೇಹ
ಬಯಸುವ ಮನಸ್ಸು ನನಗಿಲ್ಲ,
ಜೀವಕ್ಕೆ ಜೀವವೆಂಬ ಹುಸಿ ನಂಬಿಕೆ
ಕೊಟ್ಟು, ನಡು ನೀರಲ್ಲಿ ಕೈ ಬಿಡುವ ಬಯಕೆ
ಎನಗಿಲ್ಲ, ಅದಕೆ ಎಲ್ಲರಿಂದ ನಾ ದೂರ,
ಅದಕ್ಕೆ ನಾ ಏಕಾಂಗಿ ಅಲ್ಲವೇ?

ಎನ್ನ ಮನಸ್ಸಿಗೆ ನೋವಾದಿತೆಂದು
ಬಾಯಿ ಬಿಟ್ಟು ಹೇಳಿದ್ದು ನನ್ನ ತಪ್ಪು,
ಎಲ್ಲರಂತೆ ಮನಸ್ಸಲ್ಲಿ ಇರ್ಷ್ಯೇ, ದ್ವೆಶವ
ಹೊತ್ತೊಯ್ಯದೆ ಮನಸಿನ ನೋವ ತಿಳಿಸಿದ್ದೆ,
ಅದಕ್ಕೆ, ಎಲ್ಲರ ಹತ್ತಿರ ಸಲ್ಲದವಳು ನಾನು ಅಲ್ಲವೇ?

ಜಗತ್ತೇ,
ನೀನೇನೆ ಅಂದರು ನಾ ನಗುವೇ,
ನೀನೆಷ್ಟೇ ತಿಳಿದರು ನಾ ಮುನ್ನುಗ್ಗುವೆ,
ಮುನ್ನುಗ್ಗಲು ಮೆಟ್ಟಿಲುಗಳಾದ ನನ್ನ ಕನಸುಗಳಿವೆ,
ಛಲ ನೀಡಲು ನನಗೆ ವಿಶ್ವಾಸವಿದೆ,
ಜಗತ್ತೇ ನೀನೆ ಸರಿ!!!




ಗುರುವಾರ, ಜುಲೈ 10, 2008

ದ್ವಂದ್ವ

ದ್ವಂದ್ವ
ಬಾಲ್ಯ,
ರಾತಿ ಕಂಡ ಹೊಂಗನಸೊಂದು,
ಎದೆಯೊಳೊಗೊಂದು ಬೀಜ ಬಿತ್ತಿತ್ತು,
ಆ ಬೀಜಕ್ಕೆ ಕಷ್ಟ ಪಟ್ಟು ನೀರೆರೆದೆ.

ಬೀಜ ಮೊಳಕೆಯೊಡೆದು ಗಿಡವಾಯ್ತು,
ಗಿಡದ ಜೊತೆಗೆ ಮನಸು ಬೆಳೆಯಿತು,

ಈಗ,
ಬೇರೆಯವರ ಮುಳ್ಳಿನ ವರ್ತನೆಯಿಂದ ಬೇಸತ್ತೆ,
ಅವರಂತೆ ನಾನು ಕೂಡ ನಟಿಸಲು ಕಲಿತೆ,
ಗಿಡ ಬೆಳೆದು ಹೆಮ್ಮರವಾಗಿದೆ,
ಆದರೆ ಆ ನಟನೆಯಿಂದ ಮನಸು ಕುಬ್ಜವಾಗಿದೆ,
ಗಿಡ ಬೆಳೆದಂತೆ ಮನಸ್ಸು ಬೆಳೆಯುತ್ತಿಲ್ಲ!!

ಏನು ಮಾಡಲೆಂದು ತಿಳಿಯುತ್ತಿಲ್ಲ,
ಮನದಲ್ಲಿ ಕುಡಿಯದೆ,
ಪರರಂತೆ ನಟಿಸುತ್ತ ಅವರಲ್ಲಿ ಒಂದಾಗಿ ಬಿಡಲ?
ಅಥವಾ,
ಅವರ ಪಾಡಿಗೆ ಅವರ ಬಿಟ್ಟು,
ನನ್ನ ಕನಸಿನ ಜೊತೆಗೆ ನಾ ಇದ್ದು ಬಿಡಲ?

-ರಂಜಿತ

ವಿಧಿ

ವಿಧಿ
ಅವರಲ್ಲಿ ಇಲ್ಲದಿರುವುದು ನನ್ನಲ್ಲುಂಟು,
ಆದರು ಅವರು ನನಗಿಂತ ಮುಂದೆ,
ಕಾಲ ಸವೆಸಿ ನಡೆದರೂ, ಮುನ್ನುಗ್ಗಲಾಗುತ್ತಿಲ್ಲ
ಎಂಥ ವಿಧಿ! ಎಷ್ಟು ಕ್ರೂರ ಈ ವಿಧಿ !!

ವಿಧಿಯ ನೆನೆದು ಅತ್ತೆ ! ಆಕಾಶವೇ ಕಳಚಿದೆ,
ಅನ್ನುವಷ್ಟು ದುಖಿಸಿದೆ! ಕಣ್ಣೀರೆ ಕಣ್ಣ,
ಮುಂದೆ ಪರದೆಯಾಗಿತ್ತು, ಅದರ ಮುಂದೆ,
ನನ್ನವರು ಪರರಾಗಿಬಿಟ್ಟಿದ್ದರು!

ಹರಿದ ಕಣ್ಣೀರು ಬತ್ತಿ ಹೋಗಿ ,
ಪರದೆ ಸರಿಯಿತು!!!
ಪಕ್ಕಕ್ಕೆ ನೋಡಿದೆ, ಹಸುಗೂಸೊಂದು,
ಅನಾಥವಾಗಿ ಅಳುತ್ತಿದೆ!

ತಿಳಿಯಿತು,
ವಿಧಿ ನನ್ನ ಜೊತೆ ಆಡಿದ್ದು ಬರಿ 'ಆಟ
ಮಗುವಿನ ಮೇಲಿಟ್ಟು ಅದರ ಕ್ರೂರ ನೋಟ,
ವಿಧಿಯ ದೂಷಿಸಿ ತಪ್ಪೆಸಗಿದ್ದೆ, ಮಗುವ
ಹೊತ್ತು ಮುನ್ನಡೆದೆ! ವಿಧಿಯ ಎದುರಿಸಲು,
ಮಗುವಿನ ಬೆಂಗಾವಲಾಗಿ,
ಮಗುವಿನ ಜೊತೆ ಸಜ್ಜಾಗಿ!!

-ರಂಜಿತ