ಗೆಳೆಯ
ದಡಬಡಿಸಿ ಮುನ್ನುಗ್ಗುತಿರುವಈ ಕಾಲ ಬದಲಾಗಿದೆಯ,
ಅಥವಾ, ಅದರ ಗತಿಯಲಿ
ನಡೆಯಬೇಕೆನ್ನುತ್ತಿರುವ ಗೆಳೆಯ
ನೀನು ಬದಲಾಗಿದ್ದೀಯಾ?
ಪ್ರೀತಿಯೇಮ್ಬ ಮರಳಿನಲ್ಲಿ, ಆಸೆಯ
ಗೋಪುರ ಹೊತ್ತು ಕಟ್ಟಿದ್ದ ಮರಳಿನ ಮನೆ,
ನೆನಪಿದೆಯೆ??
ಆಸೆಯ ಗೋಪುರ ಈಗ ಅರಮನೆಯಾಗಿದೆ
ಆದರೆ ಅಲ್ಲಿ ಪ್ರೇಮವಿಲ್ಲ,
ಹೇಳು,
ಗೆಳೆಯ ನೀನು ಬದಲಾಗಿದ್ದೀಯ?
ನನಗೋಸ್ಕರ ನೀನಿದ್ದೆ, ಜೊತೆಗೂಡಿ
ಕನಸು ಕಾಣುತ್ತಿದ್ದ, ಆ ಸಮಯ
ನೆನಪಿದೆಯೆ??
ಕನಸುಗಳೆನೋ ನನಸಾಗಿವೆ
ಆದರೆ ನಿನಗೆ ನನಗೋಸ್ಕರ ಸಮಯವಿಲ್ಲ
ಹೇಳು,
ಗೆಳೆಯ ನೀನು ಬದಲಾಗಿದ್ದೀಯ?
ಎಡವಿ ಬಿದ್ದೆನೆಂದು, ಇಡಿ
ದಿನ ನನ್ನ ಜೊತೆ ಕಳೆದಿದ್ದು
ನೆನಪಿದೆಯೆ??
ಈಗ ದುಃಖದ ಮಡುವಿನಲ್ಲಿರುವೆ
ಕಣ್ಣಂಚಲಿರುವ ಹನಿ ಕಾಣದಾದೆಯ
ಏಕಿ ಬದಲಾವಣೆ ಗೆಳೆಯ???
ಇನ್ನು,
ಕಾಲದ ಗತಿಯಲ್ಲಿ ಚಲಿಸಿದ್ದು ಸಾಕು
ನಿನ್ನ ಹಿಂದೆಯೇ ಓಡುತ್ತಿದ್ದೇನೆ,
ನನಗೋಸ್ಕರ ಸ್ವಲ್ಪ,
ಕಾಯುವೆಯ ಗೆಳೆಯ??
- ರಂಜಿತ
I am your fan :) A Big one!
ಪ್ರತ್ಯುತ್ತರಅಳಿಸಿ