ಅವರಲ್ಲಿ ಇಲ್ಲದಿರುವುದು ನನ್ನಲ್ಲುಂಟು,
ಆದರು ಅವರು ನನಗಿಂತ ಮುಂದೆ,
ಕಾಲ ಸವೆಸಿ ನಡೆದರೂ, ಮುನ್ನುಗ್ಗಲಾಗುತ್ತಿಲ್ಲ
ಎಂಥ ವಿಧಿ! ಎಷ್ಟು ಕ್ರೂರ ಈ ವಿಧಿ !!
ವಿಧಿಯ ನೆನೆದು ಅತ್ತೆ ! ಆಕಾಶವೇ ಕಳಚಿದೆ,
ಅನ್ನುವಷ್ಟು ದುಖಿಸಿದೆ! ಕಣ್ಣೀರೆ ಕಣ್ಣ,
ಮುಂದೆ ಪರದೆಯಾಗಿತ್ತು, ಅದರ ಮುಂದೆ,
ನನ್ನವರು ಪರರಾಗಿಬಿಟ್ಟಿದ್ದರು!
ಹರಿದ ಕಣ್ಣೀರು ಬತ್ತಿ ಹೋಗಿ ,
ಪರದೆ ಸರಿಯಿತು!!!
ಪಕ್ಕಕ್ಕೆ ನೋಡಿದೆ, ಹಸುಗೂಸೊಂದು,
ಅನಾಥವಾಗಿ ಅಳುತ್ತಿದೆ!
ತಿಳಿಯಿತು,
ವಿಧಿ ನನ್ನ ಜೊತೆ ಆಡಿದ್ದು ಬರಿ 'ಆಟ
ಮಗುವಿನ ಮೇಲಿಟ್ಟು ಅದರ ಕ್ರೂರ ನೋಟ,
ವಿಧಿಯ ದೂಷಿಸಿ ತಪ್ಪೆಸಗಿದ್ದೆ, ಮಗುವ
ಹೊತ್ತು ಮುನ್ನಡೆದೆ! ವಿಧಿಯ ಎದುರಿಸಲು,
ಮಗುವಿನ ಬೆಂಗಾವಲಾಗಿ,
ಮಗುವಿನ ಜೊತೆ ಸಜ್ಜಾಗಿ!!
-ರಂಜಿತ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ