ಸೋಮವಾರ, ಜುಲೈ 28, 2008

ಜಗತ್ತು

ಜಗತ್ತು

ಹೌದು ಜಗತ್ತೇ, ನೀನೆ ಸರಿ
ನನ್ನೊಬ್ಬ ಒಬ್ಬಂಟಿ, ನಾನೊಬ್ಬ
ಏಕಾಂಗಿ, ನಿನ್ನ ಜನರ ಹತ್ತಿರ
ಸಲ್ಲದವಳು ನಾನು, ನೀನೆ ಸರಿ !!

ಪರರ ದುಃಖ ಕೇಳಿ, ಮನದೊಳು
ಮುಸಿ ಮುಸಿ ನಕ್ಕು, ಬಾಯಲ್ಲಿ
ಸಂತೈಸುವವರ ಹತ್ತಿರ, ಬೆರೆಯಲೊಲ್ಲದ
ನಾ ಒಬ್ಬ ಒಬ್ಬಂಟಿ ಅಲ್ಲವೇ?

ಇವರಿಂದ ಲಾಭವಾದೀತೆಂದು ಸ್ನೇಹ
ಬಯಸುವ ಮನಸ್ಸು ನನಗಿಲ್ಲ,
ಜೀವಕ್ಕೆ ಜೀವವೆಂಬ ಹುಸಿ ನಂಬಿಕೆ
ಕೊಟ್ಟು, ನಡು ನೀರಲ್ಲಿ ಕೈ ಬಿಡುವ ಬಯಕೆ
ಎನಗಿಲ್ಲ, ಅದಕೆ ಎಲ್ಲರಿಂದ ನಾ ದೂರ,
ಅದಕ್ಕೆ ನಾ ಏಕಾಂಗಿ ಅಲ್ಲವೇ?

ಎನ್ನ ಮನಸ್ಸಿಗೆ ನೋವಾದಿತೆಂದು
ಬಾಯಿ ಬಿಟ್ಟು ಹೇಳಿದ್ದು ನನ್ನ ತಪ್ಪು,
ಎಲ್ಲರಂತೆ ಮನಸ್ಸಲ್ಲಿ ಇರ್ಷ್ಯೇ, ದ್ವೆಶವ
ಹೊತ್ತೊಯ್ಯದೆ ಮನಸಿನ ನೋವ ತಿಳಿಸಿದ್ದೆ,
ಅದಕ್ಕೆ, ಎಲ್ಲರ ಹತ್ತಿರ ಸಲ್ಲದವಳು ನಾನು ಅಲ್ಲವೇ?

ಜಗತ್ತೇ,
ನೀನೇನೆ ಅಂದರು ನಾ ನಗುವೇ,
ನೀನೆಷ್ಟೇ ತಿಳಿದರು ನಾ ಮುನ್ನುಗ್ಗುವೆ,
ಮುನ್ನುಗ್ಗಲು ಮೆಟ್ಟಿಲುಗಳಾದ ನನ್ನ ಕನಸುಗಳಿವೆ,
ಛಲ ನೀಡಲು ನನಗೆ ವಿಶ್ವಾಸವಿದೆ,
ಜಗತ್ತೇ ನೀನೆ ಸರಿ!!!




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ