ಜೀವನವೆಂದರೇನು ,
ಹೊಟ್ಟ್ಗೊಂದಿಷ್ಟು ಊಟ
ಮೈಗೊಂದಿಷ್ಟು ಬಟ್ಟೆ
ಇರಲಿಕ್ಕೊಂದು ಸೂರು !!!
ಈ ತ್ರಿಪಾತ್ರಗಳ ಮನ ತಣಿಸಲು
ಏನೆಲ್ಲಾ ಕಾದಾಟ, ಏನೆಲ್ಲಾ ಹೊಡೆದಾಟ
ಪರರ ಕಾಲೆಳೆದು ಮುಂಬರುವವ ಒಬ್ಬ
ರಕ್ತವನೆ ಸುರಿಸಿ ಸಾಧಿಸುವವ ಇನ್ನೊಬ್ಬ,
ಜೀವನವೆಂದರೆ ಇದೇನಾ???
ಕ್ಷಣಿಕ ಸುಖವ ಪಡೆವ ತವಕ,
ಇರುವುದನ ಮರೆತು, ಪರರ
ಸ್ವತ್ತ ಪಡೆಯುವ ಬಯಕೆ,
ಪರರ ಮೆಟ್ಟಿ, ಮುಂಬರುವೆ
ಎಂಬ ಆಸೆಯ ಅತಿರೇಕ!!
ಜೀವನವೆಂದರೆ ಇದೇನಾ???
ಸಾಧಿಸಲೆಬೇಕೆಂಬ ಹುಮ್ಮಸ್ಸು,
ಮಗುವ ನಗುವ ನೋಡಲಾರದಷ್ಟು ಆತುರ!!
ಹಂಬಲಿಸುವ ತಾಯಿಯ ಕಾಣದಷ್ಟು ಅನಾದರ,
ಜೀವನವೆಂದರೆ ಇದೇನಾ???
-ರಂಜಿತ